Thursday, July 14, 2011

ನಿನ್ನ ಸ್ನೇಹಕ್ಕೆ ಯಾವ ಹೆಸರಿಡಲಿ.......?

ಈಗ ಕೂತು ನಿನ್ನೊ೦ದಿಗೆ ಇಷ್ಟು ಆತ್ಮೀಯವಾಗಿ
ಮಾತನಾಡುವ೦ತಿರುವಾಗ ನಾನು ನನ್ನೆಲ್ಲಾ ಭಾವನೆಗಳನ್ನು
ನಿನ್ನ ಮು೦ದೆ ಹರವಿಕೊಳ್ಳಬಲ್ಲೆ ನಿನ್ನ ಪರಿಚಯವಾದ
ಮೊದಲ ದಿನ ನೀನಿಷ್ಟು ಹತ್ತಿರವಾಗುವೆಯೆ೦ದು
ಕನಸಲ್ಲೂ ಅನ್ನಿಸಿರಲಿಲ್ಲ.....

ಹೀಗೆ ಭೇಟಿಯಾಗುತ್ತಾ ಅದು ಹೇಗೆ ಸ್ನೇಹವೆ೦ಬುದು
ನಮ್ಮ ನಡುವೆ ದಿಡೀರನೆ ಹುಟ್ಟಿಬಿಟ್ಟಿತು...
ನಿಜ ಹೇಳಲೇ ನಿನ್ನ ಗೆಳೆತನ ನನ್ನ ಸೌಭಾಗ್ಯ
ನಿತ್ಯ ಜೀವ೦ತಿಕೆ ಪುಟಿಸುವ ಸ೦ಜೀವಿನಿ.....

ಈಗ ಬೆಳಗ್ಗೆ ನನ್ನ ತಲೆಯಲ್ಲಿ ಹುಟ್ಟುವ ಎಲ್ಲಾ
ಹುಚ್ಚು ಯೋಚನೆಗಳನ್ನು ಸ೦ಜೆಯೋಳಗೆ ನಿನಗೆ
ಒಪ್ಪಿಸುವ ಬಯಕೆ ನನ್ನೊಳಗೆ ಸ್ನೇಹದ ಬುಗ್ಗೆ ಚಿಮ್ಮಿಸಿದ
 ನಿನ್ನ ಸ್ನೇಹಕ್ಕೆ ಯಾವ ಹೆಸರಿಡಲಿ.......?
                   ಪ್ರದೀಪ್ ಡಾಬಸಪೇಟೆ

Saturday, July 9, 2011

ಅಪ್ಪಾ.........

ಸ್ನೇಹ ಅನ್ನೋದು ಎಲ್ಲರಿಗೂ ಸಿಗೋಲ್ಲ !
ಪ್ರೀತಿನ ಎಲ್ರುನೂ ಪಡೆಯೋಕೆ ಆಗೋಲ್ಲ !
ಅದೃಷ್ಟ ಇದ್ರೆ ಯಾರು ತಡೆಯೋಕೆ ಆಗೋಲ್ಲ !
ಪ್ರತಿಭೆ ಯಾರ ಸ್ವತ್ತು ಅಲ್ಲ !
ಬೇಳಿಲೇ ಬೇಕು ಅಂತ ಮನಸು ಮಾಡಿದ್ರೆ ಬೆಳೆಯೋದು ಏನು ಕಷ್ಟ ಅಲ್ಲ !
ನಿಸ್ವಾರ್ಥದಲಿ ನಾವಿದ್ರೆ ! ಏನು ಕಳ ಕೊಂಡರು ನೋವು ಕಾಣೋಲ್ಲ !
ಬದುಕು ಅಂದ್ರೆ ಹಾಗೇನೆ ! ಯಾರು ಊಹಿಸೋಕೆ ಆಗೋಲ್ಲ !
ಏನೇ ಇದ್ರೂನು ಪ್ರೀತಿ ಪ್ರೇಮನ ಕೊಂಡು ಕೊಳ್ಳೋಕೆ ಆಗೋಲ್ಲ !
ಅರಳಿದ ಪ್ರೀತಿ ನಿಜವಾಗಿದ್ರೆ ಏನೇ ಬಂದರೂ ಹೆದರೋದಿಲ್ಲ !
ನಾನು ಅನ್ನೋದನ್ನ ಬಿಟ್ಟು ಬಿಟ್ರೆ ನಮಗಿಂತ ದೊಡ್ದವರೇ ಇಲ್ಲ !
ಬದುಕು ಎಲ್ಲರಿಗೂ ಸುಲಭವಾಗಿ ಅರ್ಥ ಆಗೋಲ್ಲ !
ಅರ್ಥ ಮಾಡ್ಕೊಂಡ್ರೆ ಜೀವನ ಅದಕಿಂತ ಚೆಂದ ಏನೂ ಇಲ್ಲ !
ನಿರ್ಮಲವಾಗಿದ್ರೆ ಸ್ನೇಹ ಪ್ರೀತಿ ಕೂಡ ಅದರ ಮುಂದೆ ಇಲ್ಲ !
ಸ್ನೇಹ ಒಂದಿದ್ರೆ ಬದುಕಿನಲಿ ಏನೂ ಬೇಕಿಲ್ಲ !

ಇ೦ತಿ  ಪ್ರೀತಿಯ... 
                                ಪ್ರದೀಪ್ ಡಾಬಸಪೇಟೆ.... 

Thursday, July 7, 2011

""ಜೀವನದಲ್ಲಿ ಸು೦ದರವಾಗಿರುವವರನ್ನು ಪ್ರೀತಿಸಬೇಡಿ...
ನಮ್ಮ ಬದುಕನ್ನು ಸು೦ದರವಾಗಿ ಮಾಡುವವರನ್ನು
ಪ್ರೀತಿಸಿ ಆಗ ನಮ್ಮ ಜೀವನ ನಮ್ಮ ಕಲ್ಪನೆಗಿ೦ತಲೂ 
ಸು೦ದರವಾಗಿರುತ್ತದೆ....................""
                             ಇ೦ತಿ ನಿಮ್ಮ ಪ್ರೀತಿಯ
                             ಪ್ರದೀಪ್ ಡಾಬಸಪೇಟೆ

Tuesday, July 5, 2011


"ಕಣ್ಣಿ೦ದ ಆರ೦ಭವಾಗಿ, ಹೃದಯನ ತಟ್ಟಿ, ಮನಸ್ಸಲ್ಲಿ ಸೇರಿಕೊ೦ಡು 
ಭಾವನೆಗೆ ಭಾವನೆ ಬೆಸೆದು ಬಾಳನ್ನು ಸು೦ದರವಾಗಿಸುವುದೆ ಸುಮಧುರ ಪ್ರೇಮ...."

"ಹಸ್ತಲಾಘವದಿ೦ದ ಶುರುವಾಗಿ, ನ೦ಬಿಕೆಯ ತಳಹದಿಯ ಮೇಲೆ ಗೋಪುರ ನಿರ್ಮಿಸಿ
ಕಷ್ಟ-ಸುಖ ಎಲ್ಲದರಲ್ಲಿಯೂ ಕೈ ಹಿಡಿದು ಜೀವನವಿಡೀ ಜೀವಕ್ಕೆ ಜೀವ ನೀಡುವುದೇ ಸ್ನೇಹ..."

ಇವೆರಡು ಇರದಿದ್ದರೆ ಅವರದ್ದು ಯಾತರ ಬಾಳು.........? 


ಸ್ನೇಹ-ಪ್ರೀತಿ ಎ೦ಬ ಎರಡಕ್ಷರಕ್ಕೆ ಸಾವಿರ-ಸಾವಿರ 
ಯುಗ ಹುಟ್ಟಿ ಬ೦ದರು ಬೆಲೆಕಟ್ಟಲು ಸಾದ್ಯವಿಲ್ಲ.... ನಿಸ್ವಾರ್ಥ ಪ್ರೀತಿ,
ನಿಸ್ವಾರ್ಥ ಸ್ನೇಹ ಎ೦ದೂ ಅಜರಾಮರ..........ನಿಮ್ಮ ಸ್ನೇಹಕ್ಕೆ ನನ್ನ ಸಲಾ೦..
                    ಪ್ರದೀಪ್ ಡಾಬಸಪೇಟೆ...

Monday, February 21, 2011

ಯಾರಿವಳು........?


ಯಾರಿವಳು? ಯಾರಿವಳು? ಕಣ್ಮನ ತಣಿಸುವ
ಮುದ್ದನು ಬರಿಸುವ ಚಂದದ ಚೆಲುವೆ ಯಾರಿವಳು?

ಬಿಡುವಿನಲ್ಲಿ ಬ್ರಹ್ಮ ಬರೆದ ಬೊಂಬೆ ಇವಳು
ಶಾರದೆಯ ಮರೆತು ಕನಸಿನಲ್ಲಿ ಕಂಡ ಗೊಂಬೆ ಇವಳು
ಮಾರನಿಗೆ ರತಿಯ ಮರೆಸುವ ಚೆಲುವೆ ಇವಳು
ರಾಧೆಯ ಮರೆಯಿಸಿ ಕೃಷ್ಣನ ಸೆಳೆಯುವ ಸುಕೋಮಲೆ ಇವಳು.

ಯಾರಿವಳು? ಯಾರಿವಳು? ಹುಣ್ಣಿಮೆ ಚಂದ್ರನ
ಕಾಂತಿಯ ಹೊಂದಿದ ರೂಪಸಿ ರಮಣಿ ಯಾರಿವಳು?

ಇಂದ್ರ ಧನಸ್ಸನು ನಾಚಿಸುವ ಕಂಗಳ ಒಡತಿ ಇವಳು
ಸುಂದರ ಜೇನೊಸರುವ ಕೆಂದುಟಿಯ ಜವ್ವನಿ ಇವಳು
ಬಯಕೆಯ ಅಲೆಗಳ ಹೋಡೆದೆಬ್ಬಿಸುವ ಸುಳಿಗಾಳಿ ಇವಳು
ವಾತ್ಸಾಯನನ ಕನಸಿನ ಚಿರಯೌವನೆ ಇವಳು.

ಯಾರಿವಳು? ಯಾರಿವಳು? ಜಗವನೆ ಮರೆತು
ಜಗವನೆ ಸೆಳೆಯುವ ಮೋಹಕ ಮಾಯೆ ಯಾರಿವಳು?

ಇಂದ್ರಲೋಕದ ಅಪರೂಪದ ಅಪ್ಸರೆ ಇವಳು
ಸುರಾಸುರರೂ ಬಯಸುವ ಗಂಧರ್ವಕನ್ಯೆ ಇವಳು
ಕಾಳಿದಾಸನ ಕಾವ್ಯ ಶಾಕುಂತಲೆ ಇವಳು
ಜಕಣನ ನಯನ ಮನೋಹರ ಶಿಲಾಬಾಲಿಕೆ ಇವಳು.

ಯಾರಿವಳು? ಯಾರಿವಳು? ಮುಗ್ಧತೆಯೇ ಮೂರ್ತಿ-
ವೆತ್ತಂತಿರುವ ಅಮೃತಮೂರ್ತಿ ಯಾರಿವಳು?

ಭುವಿಭಾರ ಹೊತ್ತಿರುವ ಭೂತಾಯಿಯ ಮಗಳಿವಳು
ಕಾರ್ಮೋಡದ ಅರಿವಿಲ್ಲದ ಸುಕುಮಾರಿ ಇವಳು
ಕ್ರೂರಮೃಗಗಳ ಅರಿವಿಲ್ಲದ ಮುಗ್ಧಳಿವಳು
ಬೇಡನ ಸುಳಿವರಿಯದ ಹಾರಾಡುವ ಹಕ್ಕಿ ಇವಳು.
                                                      ಪ್ರದೀಪ್ ಡಾಬಸಪೇಟೆ....