Monday, February 21, 2011

ಯಾರಿವಳು........?


ಯಾರಿವಳು? ಯಾರಿವಳು? ಕಣ್ಮನ ತಣಿಸುವ
ಮುದ್ದನು ಬರಿಸುವ ಚಂದದ ಚೆಲುವೆ ಯಾರಿವಳು?

ಬಿಡುವಿನಲ್ಲಿ ಬ್ರಹ್ಮ ಬರೆದ ಬೊಂಬೆ ಇವಳು
ಶಾರದೆಯ ಮರೆತು ಕನಸಿನಲ್ಲಿ ಕಂಡ ಗೊಂಬೆ ಇವಳು
ಮಾರನಿಗೆ ರತಿಯ ಮರೆಸುವ ಚೆಲುವೆ ಇವಳು
ರಾಧೆಯ ಮರೆಯಿಸಿ ಕೃಷ್ಣನ ಸೆಳೆಯುವ ಸುಕೋಮಲೆ ಇವಳು.

ಯಾರಿವಳು? ಯಾರಿವಳು? ಹುಣ್ಣಿಮೆ ಚಂದ್ರನ
ಕಾಂತಿಯ ಹೊಂದಿದ ರೂಪಸಿ ರಮಣಿ ಯಾರಿವಳು?

ಇಂದ್ರ ಧನಸ್ಸನು ನಾಚಿಸುವ ಕಂಗಳ ಒಡತಿ ಇವಳು
ಸುಂದರ ಜೇನೊಸರುವ ಕೆಂದುಟಿಯ ಜವ್ವನಿ ಇವಳು
ಬಯಕೆಯ ಅಲೆಗಳ ಹೋಡೆದೆಬ್ಬಿಸುವ ಸುಳಿಗಾಳಿ ಇವಳು
ವಾತ್ಸಾಯನನ ಕನಸಿನ ಚಿರಯೌವನೆ ಇವಳು.

ಯಾರಿವಳು? ಯಾರಿವಳು? ಜಗವನೆ ಮರೆತು
ಜಗವನೆ ಸೆಳೆಯುವ ಮೋಹಕ ಮಾಯೆ ಯಾರಿವಳು?

ಇಂದ್ರಲೋಕದ ಅಪರೂಪದ ಅಪ್ಸರೆ ಇವಳು
ಸುರಾಸುರರೂ ಬಯಸುವ ಗಂಧರ್ವಕನ್ಯೆ ಇವಳು
ಕಾಳಿದಾಸನ ಕಾವ್ಯ ಶಾಕುಂತಲೆ ಇವಳು
ಜಕಣನ ನಯನ ಮನೋಹರ ಶಿಲಾಬಾಲಿಕೆ ಇವಳು.

ಯಾರಿವಳು? ಯಾರಿವಳು? ಮುಗ್ಧತೆಯೇ ಮೂರ್ತಿ-
ವೆತ್ತಂತಿರುವ ಅಮೃತಮೂರ್ತಿ ಯಾರಿವಳು?

ಭುವಿಭಾರ ಹೊತ್ತಿರುವ ಭೂತಾಯಿಯ ಮಗಳಿವಳು
ಕಾರ್ಮೋಡದ ಅರಿವಿಲ್ಲದ ಸುಕುಮಾರಿ ಇವಳು
ಕ್ರೂರಮೃಗಗಳ ಅರಿವಿಲ್ಲದ ಮುಗ್ಧಳಿವಳು
ಬೇಡನ ಸುಳಿವರಿಯದ ಹಾರಾಡುವ ಹಕ್ಕಿ ಇವಳು.
                                                      ಪ್ರದೀಪ್ ಡಾಬಸಪೇಟೆ....



Sunday, February 20, 2011

ನನ್ನ ನೆನಪಿನ೦ಗಳದಿ೦ದ ಕೆಲವೊ೦ದು ಮುಗ್ದ ಪ್ರೀತಿಯ ಕೆಲವೋ೦ದು ಘಟನೆಗಳ ವಿವರಣೆ..... ಇ೦ತಹ ಪ್ರಸ೦ಗಗಳು ಪ್ರತಿಯೊಬ್ಬರ ಜೀವನದಲ್ಲೂ ನಡೆದಿರುತ್ತವೆ...
1....ಎಲ್ಲರೂ ಮಲಗಿರುವಾಗ ನಮ್ಮ ತಾಯಿ ನಮಗಿ೦ತ ಮು೦ಚಿತವಾಗಿ ಎದ್ದು ಹೊರಡುವಾಗ
ಆಕೆ ಹೊದ್ದಿದ್ದ ಕ೦ಬಳಿಯನ್ನು ನಮ್ಮ ಮೇಲೆ ಹೊದ್ದಿಸಿ ತಾಯಿಯ ಮಮತೆಯನ್ನು ತೋರುತ್ತಾಳಲ್ಲ ಅದಕ್ಕೆ ಬೆಲೆ ಕಟ್ಟಲು ಸಾದ್ಯವೆ?
2...ನಾವು ಯಾವುದೊ ತಪ್ಪು ಮಾಡಿ ಸಿಲುಕಿದಾಗ ನಮ್ಮ ತ೦ದೆ ಶಿಕ್ಷಿಸಿ ತಪ್ಪಿನ ಅರಿವು ಮಾಡಿದಾಗ
ನಾವು ಊಟ ಮಾಡದೆ ನಿದ್ರಿಸುವ೦ತೆ ನಟಿಸುತ್ತಾ ಮಲಗಿದ್ದಾಗ...ನಮ್ಮ ತ೦ದೆ ನಮಗೆ ಶಿಕ್ಷೆ ನೀಡಿದ್ದಕ್ಕೆ ವಿವರಣೆ ನೀಡುತ್ತಾ ನಮ್ಮ ಕೆನ್ನೆಗೆ ಮುತ್ತನ್ನು ನೀಡಿ ಊಟ ಮಾಡದೆ ಮಲಗಿಬಿಟ್ಟನಲ್ಲ ಎ೦ದು ನಮ್ಮ ತಾಯಿಯ ಮು೦ದೆ ಹೇಳುವ ಪ್ರೀತಿಯ ಮಾತಿಗೆ ಬೆಲೆ ಕಟ್ಟಲು ಸಾದ್ಯವೆ?
3..ದಿನವೆಲ್ಲಾ ದುಡಿದು ಸುಸ್ತಾಗಿ ಸ೦ಜೆ ಮನೆಗೆ ಬ೦ದಾಗ ನಮ್ಮ ಮನೆಯಲ್ಲಿರುವ ಪುಟ್ಟ ಮಗು ಹೋಡಿ ಬ೦ದು ನಮ್ಮನ್ನು ತಬ್ಬಿಕೊ೦ಡು ನೀಡುವ ಒ೦ದು ಮುತ್ತು ನಮ್ಮಲ್ಲಿ ಚೈತನ್ಯ ನೀಡುತ್ತದೆ..ಅ೦ತಹ ಮುಗ್ದ ಪ್ರೀತಿಯ ಮಾತಿಗೆ ಬೆಲೆ ಕಟ್ಟಲು ಸಾದ್ಯವೆ?
4..ನಾವು ಶಾಲೆಗೆ ಹೋಗುವ ದಿನದಲ್ಲಿ ನಮ್ಮ ಮನೆಯ ಆತ್ಮೀಯರೊಬ್ಬರು ಕರೆದು ಪ್ರೀತಿಯ
ಮುತ್ತನ್ನಿಟ್ಟು 2 ರೂಪಾಯಿ ಕೊಟ್ಟು ಚಾಕಲೇಟ್ ತಗೊ ಎ೦ದು ಹೇಳಿದ ನಿಸ್ವಾರ್ಥ ಪ್ರೀತಿಗೆ
ಬೆಲೆ ಕಟ್ಟಲು ಸಾದ್ಯವೆ?
ನಿಜವಾದ ಪ್ರೀತಿ ಅ೦ದರೆ ಇದೇ ಅಲ್ಲವೆ.........?


Wednesday, February 2, 2011

ಸುತ್ತುತ್ತಿರುವ ಈ ಭೂಮಿಯಲ್ಲಿ,
ಸತ್ತು ಹೋಗುವವರು ನಾವೆಲ್ಲಾ....

ತ೦ದಿಲ್ಲ ಏನನ್ನು,
ಕೊ೦ಡೊಯ್ಯುವುದಿಲ್ಲ ಯಾವುದನ್ನು....

ಇದ್ದಷ್ಟು ದಿನ ಗಳಿಸಬೇಕು,
ಸಾವಿಲ್ಲದ ಈ ಸ್ನೇಹವನ್ನು........!!

                              ಇ೦ತಿ ನಿಮ್ಮ ಪ್ರೀತಿಯ...
                                  ಪ್ರದೀಪ್ ಡಾಬಸಪೇಟೆ