Tuesday, December 21, 2010

ಈಗ ಕೂತು ನಿನ್ನೊ೦ದಿಗೆ ಇಷ್ಟು ಆತ್ಮೀಯವಾಗಿ
ಮಾತನಾಡುವ೦ತಿರುವಾಗ ನಾನು ನನ್ನೆಲ್ಲಾ ಭಾವನೆಗಳನ್ನು
ನಿನ್ನ ಮು೦ದೆ ಹರವಿಕೊಳ್ಳಬಲ್ಲೆ ನಿನ್ನ ಪರಿಚಯವಾದ
ಮೊದಲ ದಿನ ನೀನಿಷ್ಟು ಹತ್ತಿರವಾಗುವೆಯೆ೦ದು
ಕನಸಲ್ಲೂ ಅನ್ನಿಸಿರಲಿಲ್ಲ.....

ಹೀಗೆ ಭೇಟಿಯಾಗುತ್ತಾ ಅದು ಹೇಗೆ ಸ್ನೇಹವೆ೦ಬುದು
ನಮ್ಮ ನಡುವೆ ದಿಡೀರನೆ ಹುಟ್ಟಿಬಿಟ್ಟಿತು...
ನಿಜ ಹೇಳಲೇ ನಿನ್ನ ಗೆಳೆತನ ನನ್ನ ಸೌಭಾಗ್ಯ
ನಿತ್ಯ ಜೀವ೦ತಿಕೆ ಪುಟಿಸುವ ಸ೦ಜೀವಿನಿ.....

ಈಗ ಬೆಳಗ್ಗೆ ನನ್ನ ತಲೆಯಲ್ಲಿ ಹುಟ್ಟುವ ಎಲ್ಲಾ
ಹುಚ್ಚು ಯೋಚನೆಗಳನ್ನು ಸ೦ಜೆಯೋಳಗೆ ನಿನಗೆ
ಒಪ್ಪಿಸುವ ಬಯಕೆ ನನ್ನೊಳಗೆ ಸ್ನೇಹದ ಬುಗ್ಗೆ ಚಿಮ್ಮಿಸಿದ
 ನಿನ್ನ ಸ್ನೇಹಕ್ಕೆ ಯಾವ ಹೆಸರಿಡಲಿ.......?
                   ಪ್ರದೀಪ್ ಡಾಬಸಪೇಟೆ

Monday, December 20, 2010

ಕಪ್ಪೆ ಚಿಪ್ಪಿನಲ್ಲಿ ಅಡಗಿರೋ ಮುತ್ತಿನ ಹಾಗೆ
ಮೊಗ್ಗಿನಲ್ಲಿ ಮುಚ್ಚಿರುವ ಸುಗ೦ಧದ ಹಾಗೆ
ಮೋಡದಲ್ಲಿ ಕುಳಿತಿರುವ ಮಳೆ ಹನಿಯ ಹಾಗೆ
ನೀ ಕುಳಿತೆ ನನ್ನ ಹೃದಯದಲ್ಲಿ ಕಣ್ಣಿನಲ್ಲಿ ಇರುವ ಕಪ್ಪು ಗುಡ್ಡೆಯ ಹಾಗೆ...
      ಇ೦ತಿ ನಿಮ್ಮ ಪ್ರೀತಿಯ
          ಪ್ರದೀಪ್ ಡಾಬಸಪೇಟೆ

Saturday, December 18, 2010

""ಸೂರ್ಯನ ಕಿರಣ ಭೂಮಿಯನ್ನು ಸ್ಪರ್ಶಿಸುವ೦ತೆ
ಹಿಬ್ಬನಿಯು ಕರಗುವ೦ತೆ
ಮೊಗ್ಗು ಹೂವಾಗುವ೦ತೆ
ದು೦ಬಿಯು ಮಧು ಹೀರುವ೦ತೆ
ನೀ ನನ್ನ ಹೃದಯಗೆದ್ದೆ ಗೆಳತಿ ನನಗೇ ತಿಳಿಯದ೦ತೆ....""
     ಇ೦ತಿ ನಿಮ್ಮ ಪ್ರೀತಿಯ
            ಪ್ರದೀಪ್ ಡಾಬಸಪೇಟೆ

Friday, December 17, 2010

""""ನಾವೇ ನಮ್ಮ ಅದೃಷ್ಟದ ಶಿಲ್ಪಿಗಳು....
ನಾವು ಸಾಧಿಸಬೇಕೆ೦ದು ನಿರ್ಧರಿಸುವ ಕಾರ್ಯ ಎ೦ದಿಗೂ ನಮ್ಮ ಸಾಮರ್ಥ್ಯಕ್ಕಿ೦ತ ಮಿಗಿಲಾದುದಲ್ಲ..ಅದು ನೀಡುವ ಶ್ರಮ,ನೋವುಗಳು ನಮ್ಮ ಸಹನಾಶಕ್ತಿಯನ್ನು ಮೀರಿದ್ದಲ್ಲ.
ನಮ್ಮ ಧ್ಯೇಯದ ಬಗ್ಗೆ ಎಲ್ಲಿಯವರೆಗೆ ನಮ್ಮ ಶ್ರದ್ದೆ ಅಚಲವಾಗಿರುವುದೋ,
ಎಲ್ಲಿಯವರೆಗೆ ಗೆಲ್ಲುವ ಛಲ ನಮ್ಮಲ್ಲಿರುವುದೋ, ಯಶಸ್ಸು ನಮ್ಮದಾಗಲೇಬೇಕು..ಇದು ನಿಶ್ಚಿತ""""

ನಿಮ್ಮ ಪ್ರೀತಿಯ..............ಪ್ರದೀಪ್ ಡಾಬಸಪೇಟೆ

Thursday, December 16, 2010

     """ಪ್ರತಿಯೊ೦ದು ಘಟನೆಗೂ ಒ೦ದು ಕಾರಣವಿರುತ್ತದೆ.., 
ಪ್ರತಿ ಘಟನೆಯ ಹಿ೦ದೆಯೂ ಒ೦ದು ಉದ್ದೇಶವಿರುತ್ತದೆ.,
ಪ್ರತಿ ಸೋಲಿನಲ್ಲೂ ಒ೦ದು ಪಾಠವಿರುತ್ತದೆ..,
ಸೋಲು ವಯುಕ್ತಿಕವಾಗಿರಲಿ, ವೄತ್ತಿದಾಯಕವಾಗಿರಲಿ, ಆದ್ಯಾತ್ಮಿಕವಾಗಿರಲಿ
ವ್ಯಕ್ತಿತ್ವದ ವಿಕಾಸಕ್ಕೆ ಅವಶ್ಯ ಎ೦ಬುದು ನನ್ನ ಭಾವನೆ.."""
                                                 ಪ್ರದೀಪ್ ಡಾಬಸಪೇಟೆ
"""ಬದುಕೆ೦ಬುದು ಹರಿವ ನದಿಯ೦ತೆ ಅಚ್ಚರಿ, ಆಘಾತದ ರೀತಿಯ ಹಠಾತ್ ತಿರುವು ಎ೦ಬುದು ಎಲ್ಲಿಯಾದರೂ ಬರಬಹುದು.. ಕಷ್ಟ-ಸುಖ, ಸಾವು-ನೋವು ಎ೦ಬುದು ದೀಡೀರನೆ ಕೆಳಕ್ಕೆ ಧುಮ್ಮಿಕ್ಕುವ೦ತೆ ಆಗಬಹುದು..ಏನೇ ಆದರೂ ಬದುಕು ಎ೦ಬ ನದಿ ಗುರಿ ಎ೦ಬ ಸಾಗರವನ್ನು ಮಟ್ಟುವವರೆಗೂ ಎಲ್ಲಿಯೂ ನಿಲ್ಲಬಾರದು.."""
ಇ೦ತಿ ನಿಮ್ಮ ಪ್ರೀತಿಯ=
           ಪ್ರದೀಪ್ ಡಾಬಸಪೇಟೆ

Friday, December 10, 2010

ಇದೇ ಜೀವನ

"ಮನಸಲ್ಲಿ ಸಾವಿರ ಮಾತಿದೆ ಹೇಳೋಕಗೋಲ್ಲ..
ಹ್ರುದಯಕ್ಕೆ ಭಾರವಾದ ನೋವಿದೆ ತೋರಿಸೋಕಾಗೊಲ್ಲ..
ಕಣ್ಣೀನ ತು೦ಬ ನೀರಿದೆ ಅಳೋಕಾಗೋದಿಲ್ಲ..
ಯಕ೦ದ್ರೆ ಜೀವನದಲ್ಲಿ ನಾವು ಅ೦ದುಕೊ೦ಡ೦ತೆ
ಯಾವುದು ನದೆಯೋದಿಲ್ಲ...
ಅದು ಗೊತ್ತಿದ್ದರು ಮನಸಲ್ಲಿ ಇರೊದನ್ನ ತೋರೆಯೋಕ೦ತು ಆಗ್ತಿಲ್ಲ..
ಮರೆಯೊಕ೦ತು ಆಗೋಲ್ಲ... ಇದೇ ಜೀವನ"...
        ಇ೦ತಿ ನಿಮ್ಮ ಪ್ರೀತಿಯ.
            ಪ್ರದೀಪ್ ಡಾಬಸಪೇಟೆ.

Thursday, December 2, 2010

2011 ರ ಜೂನ್ 12ರಂದು ಪೂರ್ವಭಾವಿ ಪರೀಕ್ಷೆ


ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್ ಪ್ರೊಬೆಷನರ್‌ಗಳ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ  2011ರ ವೇಳಾಪಟ್ಟಿ ಇದೀಗ ಪ್ರಕಟವಾಗಿದೆ.  ಈ ಬಾರಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು ಸಂಬಂಧಪಟ್ಟ ಪ್ರಕಟಣೆಯು ಲೋಕಸೇವಾ ಆಯೋಗದ ವೆಬ್‌ಸೈಟ್, ಎಂಪ್ಲಾಯ್‌ಮೆಂಟ್ ನ್ಯೂಸ್ ಪತ್ರಿಕೆಗಳಲ್ಲಿ ಮತ್ತು ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ 2011 ರ ಫೆಬ್ರವರಿ 19 ರಂದು ಪ್ರಕಟವಾಗಲಿದೆ.

 ಅರ್ಜಿ ಸಲ್ಲಿಸಲು ಕೊನೆಯ ದಿನ 2011 ರ ಮಾರ್ಚ್ 21 ಆಗಿದ್ದು ಪೂರ್ವಭಾವಿ ಪರೀಕ್ಷೆ ನಡೆಯುವ ದಿನ 2011 ರ ಜೂನ್ 12 ಆಗಿರುತ್ತದೆ. ಹಾಗೆಯೇ ಮುಖ್ಯ ಪರೀಕ್ಷೆಗಳು 2011 ರ ಅಕ್ಟೋಬರ್ 29 ರಿಂದ ಆರಂಭಗೊಳ್ಳುತ್ತವೆ ಎಂದು ಲೋಕಸೇವಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಐಎಎಸ್ ಬದಲಾದ ಪಠ್ಯಕ್ರಮ

ಬಹು ನಿರೀಕ್ಷಿತ ಬದಲಾವಣೆ ಇದೀಗ ಬಂದಿದೆ! 2011ರ ಮೇ ತಿಂಗಳಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಬದಲಾದ ರೂಪುರೇಷೆ ಬಂದಿದೆ! ಕಳೆದ ಅಕ್ಟೋಬರ್ 18ರಂದು  ಕೇಂದ್ರ ಸರ್ಕಾರದ ಸಿಬ್ಬಂದಿ, ಮತ್ತು ತರಬೇತಿ ಇಲಾಖೆಯು ಹೊರಡಿಸಿರುವ ಆದೇಶದನ್ವಯ (ಆದೇಶ ಸಂಖ್ಯೆ:13018/4/2008ಎಐಎಸ್-1) ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆ 2011ರ ನಿಗದಿಪಡಿಸಲಾಗಿರುವ ಪಠ್ಯಕ್ರಮದ ವಿವರ ಹೀಗಿದೆ:
ಪತ್ರಿಕೆ 1
 ಸಾಮಾನ್ಯ ಜ್ಞಾನ - 200 ಅಂಕಗಳು - ಅವಧಿ ಎರಡುಗಂಟೆ
1 ಪ್ರಸ್ತುತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಸಂಗತಿಗಳು
2  ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ
3 ಭಾರತ ಮತ್ತು ಪ್ರಪಂಚದ ಭೂಗೋಳ - ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳು
4 ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ - ಸಂವಿಧಾನ, ರಾಜಕೀಯ ಪದ್ಧತಿ,ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.
5 ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು, ಗ್ರಾಮೀಣ ಜನಜೀವನ ಸುಧಾರಣೆಯ ಎಲ್ಲ ಯೋಜನೆಗಳು, ಇತ್ಯಾದಿ.
6 ಪರಿಸರ ಅಧ್ಯಯನ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ. 
 ಸಾಮಾನ್ಯ ವಿಜ್ಞಾನ.
ಪತ್ರಿಕೆ 2
6 ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ - 200 ಅಂಕಗಳು  - ಅವಧಿ ಎರಡು ಗಂಟೆ
7 ಕಾಂಪ್ರಹೆನ್ಷನ್ (ನಿಗದಿಗೊಳಿಸಿದ ಮಾಹಿತಿಯನ್ನು
ಅರ್ಥೈಸಿಕೊಂಡು ಉತ್ತರಿಸುವುದು)
8 ಸಂವಹನ ಕೌಶಲಗಳು ಮತ್ತು ವ್ಯಕ್ತಿಗತ ಕೌಶಲಗಳು (ಇಂಟರ್‌ಪರ್ಸನಲ್ ಸ್ಕಿಲ್ಸ್)
9 ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ-  ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ
10 ಸಾಮಾನ್ಯ ಬೌದ್ಧಿಕ ಸಾಮರ್ಥ್ಯ
11 ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ ಇತ್ಯಾದಿ),
12 ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ
   ಇತ್ಯಾದಿ - ಹತ್ತನೇ ತರಗತಿಯ ಮಟ್ಟದ್ದು)
13 ಇಂಗ್ಲಿಷ್ ಕಾಂಪ್ರೆಹನ್ಷನ್

ಇತ್ತೀಚೆಗೆ ಅಖಿಲ ಭಾರತಮಟ್ಟದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ (ಕಾಮನ್ ಅಡ್ಮಿಷನ್ ಟೆಸ್ಟ್ - ಕ್ಯಾಟ್) ಮಾದರಿಯಲ್ಲಿ  ಈ ಎರಡನೇ ಪತ್ರಿಕೆ ರಚಿತವಾಗಿದೆ. ಇವುಗಳಿಗೆ ಸಿದ್ಧತೆ ಮಾಡಿಕೊಳ್ಳಲು ಎನ್.ಸಿ.ಇ.ಆರ್.ಟಿ. ಪ್ರಕಟಿಸಿರುವ ಕೇಂದ್ರೀಯ ವಿದ್ಯಾಲಯಗಳ 6 ರಿಂದ 12ನೇ ತರಗತಿವರೆಗಿನ ಪುಸ್ತಕಗಳನ್ನು, ಸರ್ಕಾರದ ಅಧಿಕೃತ ಜಾಲತಾಣಗಳನ್ನು, ಸರ್ಕಾರಿ ಗೆಝೆಟ್ ಮತ್ತು ಮ್ಯಾಗಝಿನ್‌ಗಳನ್ನು, ವಾರ್ಷಿಕ ಪುಸ್ತಕಗಳನ್ನು, ಐಚ್ಛಿಕ ವಿಷಯದ ಪುಸ್ತಕ ಮತ್ತು ನೋಟ್ಸ್ ಓದಬಹುದು.

ಪೂರ್ವಭಾವಿ ಪರೀಕ್ಷೆಯ ಈ ಎರಡು ಪತ್ರಿಕೆಗಳನ್ನು ಬಿಟ್ಟರೆ ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ಪ್ಯಾಟರ್ನ್ ಈಗ ಇರುವಂತೆಯೇ ಮುಂದುವರಿಯಲಿದೆ. ಮುಂದೆ ಅಗತ್ಯ ಬದಲಾವಣೆಗಳನ್ನು ಸೂಚಿಸುವ ಸಾಧ್ಯತೆಗಳೂ ಇವೆ.  ವೆಬ್‌ಸೈಟ್ ವಿಳಾಸ :  www.upscportal.com

cortasy prajavani..ಕತ್ತಲೆಯಲ್ಲಿ ಬೆಳಕನ್ನು ಹುಡುಕುತ್ತಾ

ಕತ್ತಲೆಯಲ್ಲಿ ಬೆಳಕನ್ನು ಹುಡುಕುತ್ತಾ!
ಅನೀಲ ಕಾಜಗಾರ
ಅನೇಕ ಅಡೆತಡೆಗಳು ಇದ್ದರೂ ವಿದ್ಯೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಯೊಬ್ಬನ ಕಥೆ ಇಲ್ಲಿದೆ.ಈ ವಿದ್ಯಾರ್ಥಿಯ ಹಿನ್ನೆಲೆ ಕೇಳಿದರೇ ಬೆರಗಾಗುವಂಥದ್ದು.
ಇವನ ಹೆಸರು ಮಲ್ಲಪ್ಪ ನಿಂ. ಬಂಡಿ. ಈತ ಈಗ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಎಂ.ಎ ಓದುತ್ತಿದ್ದಾನೆ.ತನ್ನ ಬಿ.ಎ ಪದವಿಯಲ್ಲಿ ಕವಿವಿಗೆ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದ ಹುಡುಗನೀತ. ಇದರಲ್ಲಿ ಏನು ವಿಶೇಷ ಇದೆ ಅಂತೀರಾ! ಸ್ನೇಹಿತರೆ ಎಲ್ಲರಂತೆ ಇವನಲ್ಲ. ಏಕೆಂದರೆ ನಮಗೆ ಇರುವಂತೆ ಇವನಿಗೆ ಕಣ್ಣು ಇಲ್ಲ. ಈತ ಅಂಧ ವಿದ್ಯಾರ್ಥಿ.ಇವನ ಜೀವನದ ಸುತ್ತಲೂ ಕತ್ತಲಗೋಡೆ ಆವರಿಸಿದ್ದರೆ, ಅದೇ ಕತ್ತಲಲ್ಲಿ ಬೆಳಕನ್ನ ಹುಡುಕುವ ಮನೋಭಾವವನ್ನು ಈ ಮಲ್ಲಪ್ಪ ಹೊಂದಿದ್ದಾರೆ. ಹೀಗಾಗಿಯೇ ಅಂಧತ್ವ ಆತನ ಶಿಕ್ಷಣಕ್ಕೆ ಯಾವ  ಅಡ್ಡಿಯೊಡ್ಡಲಿಲ್ಲ.

ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಹೆರಕಲ್ ಎಂಬ ಚಿಕ್ಕ ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಈತ ತನ್ನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಅಂಧ ಮಕ್ಕಳ ಶಾಲೆ ಹುಬ್ಬಳ್ಳಿಯಲ್ಲಿ ಮುಗಿಸಿದ. ತಮ್ಮ ಬ್ರೇಲ್ ಲಿಪಿಯಿಂದ ಹತ್ತನೆ ತರಗತಿಯಲ್ಲಿ ಈತ 90.24% ಅಂಕ ಪಡೆಯುವುದರ ಮೂಲಕ ರಾಜ್ಯಕ್ಕೆ ಅಂಗವಿಕಲ ವಿದ್ಯಾರ್ಥಿಗಳ ಪೈಕಿ ರ್ಯಾಂಕ್ ಗಳಿಸಿದ. ಇದಕ್ಕಾಗಿ ಅಂದಿನ ರಾಜ್ಯಪಾಲ ಟಿ. ಎನ್.ಚತುರ್ವೇದಿ ಅವರು ಮಲ್ಲಪ್ಪನಿಗೆ ಸನ್ಮಾನ ಮಾಡಿದ್ದಾರೆ.

ಪಿಯುಸಿ ಅಧ್ಯಯನವನ್ನು ಕೆ.ಎಲ್.ಇ ಸಂಸ್ಥೆಯ ಶ್ರೀ ಕಾಡಶಿದ್ದೇಶ್ವರ ಕಲಾ ಮಹಾವಿದ್ಯಾಲಯ ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದ.ಅನೇಕ ಸಂಸ್ಕತಿಕ ಚಟುವಟಿಕೆಗಳಲ್ಲಿ, ಭಾಷಣಗಳಲ್ಲಿ ಭಾಗವಹಿಸಿದ ಇವನು ಅಲ್ಲಿಯೂ ತನ್ನ ಪದಕದ ಬೇಟೆ ಮುಂದುವರಿಸಿದ. ದ್ವಿತೀಯ ಪಿಯುಸಿಯಲ್ಲಿ 89.16% ಅಂಕ ಪಡೆಯುವುದರ ಮೂಲಕ ಮತ್ತೆ ರ್ಯಾಂಕ್ ಪಟ್ಟವನ್ನು ತನ್ನದಾಗಿಸಿಕೊಂಡು, ಧೀರೂಬಾಯಿ ಅಂಬಾನಿ ಫೆಡರೇಶನ್‌ನಿಂದ ವಿದ್ಯಾರ್ಥಿವೇತನ ಪಡೆದಿದ್ದಾನೆ.

ನಂತರ ಅದೇ ಶಿಕ್ಷಣ ಸಂಸ್ಥೆಯಲ್ಲಿ ತನ್ನ ಬಿ.ಎ ಪದವಿಯನ್ನು ಮುಂದುವರೆಸಿದ. ಅಲ್ಲಿಯೂ ಈ ಅಂಧ ವಿದ್ಯಾರ್ಥಿ ಬಿ.ಎ. ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ ರ್ಯಾಂಕ್ ಬಂದು ಡಾ.ಡಿ.ಸಿ. ಪಾವಟೆ ರ್ಯಾಂಗ್ಲರ್ ವಿದ್ಯಾರ್ಥಿವೇತನ ಗೌರವವನ್ನು ಗಳಿಸಿದ.ಅಲ್ಲದೆ ರಾಷ್ಟ್ರೀಯ ಅಂಧರ ಫೆಡರೇಷನ್‌ನಿಂದ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಗೌರವಕ್ಕೂ ಪಾತ್ರನಾಗಿದ್ದಾನೆ.

ಕವಿವಿ ಪ್ರಕಟಿಸಿರುವ ರ್ಯಾಂಕ್ ಪಟ್ಟಿಯಲ್ಲಿ ಬಿಎ ಪದವಿಯಲ್ಲಿ 91.16% ರಷ್ಟು ಫಲಿತಾಂಶ ಪಡೆದು ಸ್ವರ್ಣ ತಿಲಕ ವಿದ್ಯಾರ್ಥಿಯಾದ.ಅದೂ ಸಾಮಾನ್ಯರನ್ನ ಅಂದ್ರೆ ಕಣ್ಣಿದ್ದವರನ್ನ ಮೀರಿಸಿ ಈ ಸಾಧನೆಗೈದಿರುವುದು ಹೆಮ್ಮೆಯ ವಿಚಾರ. ಈತನ ಸಾಧನೆಯ ಹಿಂದೆ ರಾಜ್ಯದ ಅನೇಕ ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ಮಾಡುತ್ತಾ ಬೆನ್ನೆಲುಬಾಗಿ ನಿಂತಿದ್ದಾರೆ.ಈ ವಿದ್ಯಾರ್ಥಿಗೆ ವೆಂಕೋಬರಾವ್ ಶಿಂಧೆ ಬ್ರದರ್ಸ್‌ ಎನ್ನುವ ಉದ್ಯಮಿಗಳು ಶಿಕ್ಷಣಕ್ಕೆ ಬೇಕಾಗುವ ಹಣವನ್ನು ನೀಡುತ್ತಿದ್ದಾರೆ.ವಿಪರ್ಯಾಸ ಎಂದರೆ ಈ ವಿದ್ಯಾರ್ಥಿಯನ್ನು ಅವರು ಒಮ್ಮೆಯೂ ನೋಡಿಲ್ಲ.

ಇಂತಹ ಮಹತ್ತರ ಸಾಧನೆ ಮಾಡಲು ಸ್ಫೂರ್ತಿ ಯಾರು ಅಂತಾ ಕೇಳಿದರೆ ‘ಈ ನನ್ನ ಎಲ್ಲ ಸಾಧನೆಯ ಫಲ, ಸ್ನೇಹಿತರಿಗೆ ಹಾಗೂ ವಿದ್ಯಾಗುರುಗಳಿಗೆ ಸಲ್ಲಬೇಕು. ಜೀವನದಲ್ಲಿ ನಾ ಎಂದೂ ಇವರನ್ನು ಮರೆಯುವುದಿಲ್ಲ. ನಮ್ಮ ಮನೆಯಲ್ಲಿ ಉನ್ನತ ಶಿಕ್ಷಣವನ್ನು ಕಲಿಯುತ್ತಿರುವವನು ನಾನೇ ಮೊದಲಿಗ. ಉನ್ನತ ಶಿಕ್ಷಣ ಎಂದರೇನೆ ಗೊತ್ತಿಲ್ಲದ ನಮ್ಮವರು ಖುಷಿಯಿಂದ ಓದಿಸುತ್ತಿದ್ದಾರೆ. ಮುಂದೆ ಪ್ರೊಫೆಸರ್ ಆಗುವ ಕನಸನ್ನು ಹೊಂದಿರುವ ಈ ಪ್ರತಿಭೆಗೆ ತಾನು ಕಂಡಿರುವ ಕನಸು ಸಾಕಾರಗೊಳ್ಳಲಿ ಎನ್ನುವುದೇ ನಮ್ಮೆಲ್ಲರ ಆಶಯ. ನೀವೂ ಅಭಿನಂದನೆ ಹೇಳಬಯಸುವುದಾದರೆ:   96200 09728

thanx to prajavani...

ಬಂತೊಂದು ಹೊಸ ವರುಷ

ಹಳೆದು ಬಸವಳಿದು ಕಳೆದೋಯಿತೊಂದು ವರುಷ ನಲಿದು ನೆಗೆನೆಗೆದು ಬಂತೊಂದು ಹೊಸ ವರುಷ   ಅಂತೆ-ಕಂತೆಯೆಲ್ಲ ಏಕೆ ಬೇಕು ಬಾಳಲಿ ಚಿಂತೆ-ಗಿಂತೆಯೆಲ್ಲ ಮರೆತು ಬಾಳು ಹಸನಾಗಲಿ   ಕಂಡ ಕನಸುಗಳು ನೂರು ಇವೆ ಜೊತೆಯಲಿ ನಮ್ಮ ಮನಸುಗಳು ದುಡಿದು ಕನಸೆಲ್ಲ ನನಸಾಗಲಿ   ವರುಷವಿಡಿ ಇರಲಿ ಎಲ್ಲ ನಲಿದಾಡೋ  ಸಂಭ್ರಮ ನೋವುಗಳೆಲ್ಲ ಮರೆಯಲಿ ಸುಖಿಸುತ ಆರೋಗ್ಯ ಕ್ಷೇಮ   ಹೊಸ ವರುಷವೊಂದು ಕೋರುತಿದೆ ನಿಮಗೆ ಶುಭಾಶಯ ವರುಷದ ಹರ್ಷವೊಂದು ಕಾಯುತಿದೆ ನಿಮ್ಮನ್ನೇ ಮಹಾಶಯ...